Thursday, April 21, 2016

ಮಕ್ಕಳ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ಪತ್ರಕರ್ತ ನಾಗರಾಜ ಕಿರಣಗಿ ಮಾಹಿತಿ

ಮಕ್ಕಳ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ಪತ್ರಕರ್ತ ನಾಗರಾಜ ಕಿರಣಗಿ ಮಾಹಿತಿ 
  
ಧಾರವಾಡ: ನಮ್ಮ ದೇಶದಲ್ಲಿನ ನ್ಯಾಯಾಲಯ ವ್ಯವಸ್ಥೆ, ಕಾನೂನು ತಿಳುವಳಿಕೆ ಕುರಿತು ಪ್ರತಿಯೊಬ್ಬರು ಅರಿವು ಹೊಂದುವುದು ಅಗತ್ಯವಾಗಿದೆ. ವಿಶೇಷವಾಗಿ ಈ ಕುರಿತು ಮಕ್ಕಳಿಗೆ ಶಾಲಾ ಹಂತದಲ್ಲಿಯೇ ನ್ಯಾಯದಾನ ಪ್ರಕ್ರಿಯೆಯ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹಿರಿಯ ವಕೀಲ ವೆಂಕಟೇಶ ಕುಲಕರಣಿ ಹೇಳಿದರು.
ಅವರು ಕಮಲಾಪುರ ಸಕರ್ಾರಿ ಶಾಲೆ ನಂ. 4ರಲ್ಲಿ ಬಾಲನಂದನ ಟ್ರಸ್ಟ್, ಮಾಸ್ ಮೀಡಿಯಾ ಕಮ್ಯೂನಿಕೇಶನ್ಸ್ ಫಾರ್ ಅರ್ಬನ್ ಆಂಡ್ ರೂರಲ್ ಡೆವಲಪ್ಮೆಂಟ್ ಸೆಂಟರ್ ಕನರ್ಾಟಕ, ಪುರ ಟ್ರಸ್ಟ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯದ ಗುಲಗಂಜಿಕೊಪ್ಪ ಕ್ಲಸ್ಟರ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕನಸು ಹೊತ್ತ ಚಿಣ್ಣರ ವಿಶೇಷ ಉಚಿತ ಬೇಸಿಗೆ ಶಿಬಿರದ ಮೂರನೇ ದಿನದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಾನೂನು ತಿಳುವಳಿಕೆ ಹಾಗೂ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾಲೂಕು ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಿಂದ ಸುಪ್ರೀಂಕೋಟರ್್ ವರೆಗೆ ವಿವಿಧ ಹಂತಗಳು, ಗ್ರಾಹಕರ ನ್ಯಾಯಾಲಯ ಹಾಗೂ ವಕೀಲರಾಗಲು ಇರುವ ಅರ್ಹತೆ, ವಿವಿಧ ಪ್ರಕರಣಗಳ ಕುರಿತು ಉದಾಹರಣೆ ಸಮೇತ ಮಕ್ಕಳಿಗೆ ತಿಳುವಳಿಕೆ ನೀಡಿದರು.
ಬಳಿಕ ಮಕ್ಕಳಿಗೆ ಕುವೆಂಪು ಅವರ ಬೊಮ್ಮನಹಳ್ಳಿ ಕಿಂದರಜೋಗಿ ಪದ್ಯ ಓದಿ, ಮಕ್ಕಳ ಮನ ಸೊರೆಗೊಂಡರು. ನಂತರ ಮಕ್ಕಳೊಂದಿಗೆ ವಿವಿಧ ವಿಷಯಗಳ ಕುರಿತು ಸಂವಾದ ನಡೆಯಿತು.
ಮಕ್ಕಳ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ಪತ್ರಕರ್ತ ನಾಗರಾಜ ಕಿರಣಗಿ ಮಾಹಿತಿ ನೀಡಿದರು. ಸಿಆರ್ಪಿ ಆರ್.ಎಂ. ಸವಣೂರ ಮಕ್ಕಳಿಗೆ ಹಾಡು ಕುಣಿತ ಕಲಿಸಿಕೊಟ್ಟರು. ಶಿಬಿರದ ನಿದರ್ೇಶಕ ವಿಜಯಾನಂದ ದೊಡವಾಡ ಮಕ್ಕಳಿಗೆ ಯೋಗ, ಶಿಸ್ತು ಹಾಗೂ ಆರೋಗ್ಯದ ಗುಟ್ಟುಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿದರ್ೇಶಕ ಶಿವಶಂಕರ ಹಿರೇಮಠ, ಮಾಸ್ ಮೀಡಿಯಾ ಕಮ್ಯೂನಿಕೇಶನ್ಸ್ ಫಾರ್ ಅರ್ಬನ್ ಆಂಡ್ ರೂರಲ್ ಡೆವಲಪ್ಮೆಂಟ್ ಸೆಂಟರ್ ಕನರ್ಾಟಕ ಅಧ್ಯಕ್ಷ ಶಶಿಕಾಂತ ದೇವಾಡಿಗ, ಬಾಲನಂದನ ಟ್ರಸ್ಟ್ ಅಧ್ಯಕ್ಷೆ ಪ್ರೀತಿ ಎನ್. ಕಿರಣಗಿ ಉಪಸ್ಥಿತರಿದ್ದರು.

No comments:

Post a Comment