Monday, April 18, 2016

ನಾನು ಮತ್ತು ನನ್ನ ಒಡಲಾಳ ಸೇರಿ ಮೂರು ಕೃತಿಗಳ ಲೋಕಾರ್ಪಣೆ

 ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ಟೂರಿಂಗ್ ಟಾಕೀಜ್, ನಾನು ಮತ್ತು ನನ್ನ ಒಡಲಾಳ ಹಾಗೂ ಆಹಾರ ಆರೋಗ್ಯ ಹಾಗೂ ಸೂಕ್ಷ್ಮಾಣು ಜೀವಿಗಳು ಕೃತಿಗಳನ್ನು ನಾಡೋಜ ಪಾಟೀಲ ಪುಟ್ಟಪ್ಪ ಲೋಕಾರ್ಪಣೆಗೊಳಿಸಿದರು. ನಾಗರಾಜ ಕಿರಣಗಿ,  ಡಾ. ಸುವಣರ್ಾ ಸಿ. ಚವಣ್ಣವರ, ಮನೋಹರ ಯಡವಟ್ಟಿ, ಪ್ರೊ. ವಸಂತ ಕುಷ್ಟಗಿ, ಶ್ಯಾಮ್ ಕುಷ್ಟಗಿ ಹಾಗೂ ಸುಭಾಸ ನರೇಂದ್ರ ಉಪಸ್ಥಿತರಿದ್ದರು
ಟೂರಿಂಗ್ ಟಾಕೀಜ್, ನಾನು ಮತ್ತು ನನ್ನ ಒಡಲಾಳ ಸೇರಿ ಮೂರು ಕೃತಿಗಳ ಲೋಕಾರ್ಪಣೆ
ಪತ್ರಕರ್ತರು ಚಾರಿತ್ರ್ಯವಂತರಾಗಿರಬೇಕು : ಪಾಟೀಲ ಪುಟ್ಟಪ್ಪ
ಧಾರವಾಡ: ಪತ್ರಕರ್ತರು, ಲೇಖಕರು ಹಾಗೂ ಸಾಹಿತಿಗಳು   ಚಾರಿತ್ರ್ಯವಂತರಾಗಿರಬೇಕು. ಚಾರಿತ್ರ್ಯವಂತರಾಗಿದ್ದರೇ ಮಾತ್ರ ಅವರನ್ನು ಸಮಾಜ ದೊಡ್ಡವರೆಂದು ಗುರುತಿಸುತ್ತದೆ ಎಂದು ನಾಡೋಜ ಪಾಟೀಲ ಪುಟ್ಟಪ್ಪ ಹೇಳಿದರು.
ಅವರು ನಗರದ ಆಲೂರು ವೆಂಕಟರಾವ್ ಭವನದಲ್ಲಿ ಶನಿವಾರ ಸಂಜೆ 6 ಗಂಟೆಗೆ ನಮ್ಮ ಪಲ್ಸ್ ಮೀಡಿಯಾ ಮನೆ ಪ್ರಕಾಶನ ಸಂಸ್ಥೆ ಹಾಗೂ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರಾದ ಮನೋಹರ ಯಡವಟ್ಟಿ ಅವರ ಟೂರಿಂಗ್ ಟಾಕೀಜ್, ನಾಗರಾಜ ಕಿರಣಗಿ ಅವರ ನಾನು ಮತ್ತು ನನ್ನ ಒಡಲಾಳ ಹಾಗೂ ವಿಜ್ಞಾನ ಲೇಖಕಿ ಡಾ. ಸುವಣರ್ಾ ಸಿ. ಚವಣ್ಣವರ ಅವರ ಆಹಾರ ಆರೋಗ್ಯ ಹಾಗೂ ಸೂಕ್ಷ್ಮಾಣು ಜೀವಿಗಳು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ಅಧ್ಯಯನ ಕೊರತೆ ಎದುರಿಸುತ್ತಿದ್ದು, ಯಾರೊಬ್ಬರ ಪೂವರ್ಾಪುರ, ಇತಿಹಾಸದ ಜ್ಞಾನವಿಲ್ಲದವರು ಪತ್ರಕರ್ತರಾಗುತ್ತಿರುವುದು ಸೋಜಿಗದ ಸಂಗತಿಯಾಗಿದೆ. ಪತ್ರಿಕೋದ್ಯಮದ ಕಾಲೇಜುಗಳು ಸಹ ವಿದ್ಯಾಥರ್ಿಗಳಲ್ಲಿ ಜ್ಞಾನ ತುಂಬುವಲ್ಲಿ ವಿಫಲವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಪತ್ರಕರ್ತರು ಯಾರ ಬಿಡೇಗೂ ಒಳಗಾಗದೇ, ಯಾರೊಂದಿಗೂ ರಾಜೀ ಮಾಡಿಕೊಳ್ಳದೆ ಕೆಲಸಮಾಡಬೇಕು. ಪತ್ರಕರ್ತರು ಒಂದು ಬಾರಿ ಚಾರಿತ್ರ್ಯ ಕಳೆದುಕೊಂಡರೆ ಮರಳಿ ಪಡೆಯುವುದು ಕಷ್ಟ ಸಾಧ್ಯ ಎಂದು ಹೇಳಿದರು. 
ಹಿರಿಯ ಪತ್ರಕರ್ತರಾದ  ಗಣೇಶ ಜೋಶಿ, ಸಚಿನ್ ಶಿವಪೂರ ಹಾಗೂ ಹಿರಿಯ ಛಾಯಾಗ್ರಾಹಕರಾದ ಗಣಪತಿ ಜರತಾರಫರ್ ಅವರಿಗೆ 2016ರ ಪಿಎಂ2 ಸಂಸ್ಥೆಯ ಗೌರವ ಸಮ್ಮಾನ ಹಾಗೂ ಪತ್ರಿಕಾ ಸಾಹಿತಿಗಳಾದ ಮನೋಹರ ಯಡವಟ್ಟಿ, ನಾಗರಾಜ ಕಿರಣಗಿ, ವಿಜ್ಞಾನ ಲೇಖಕಿ ಡಾ.. ಸುವಣರ್ಾ ಸಿ. ಚವಣ್ಣವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 
ಹಿರಿಯ ರಂಗಕಮರ್ಿ ಸುಭಾಸ ನರೇಂದ್ರ ಅವರು ಮನೋಹರ ಯಡವಟ್ಟಿ ಅವರ ಟೂರಿಂಗ್ ಟಾಕೀಸ್ ಹಾಗೂ ನಾಗರಾಜ ಕಿರಣಗಿ ಅವರ ನಾನು ಮತ್ತು ನನ್ನ ಒಡಲಾಳ ಕೃತಿಗಳ ಕುರಿತು ಮಾತನಾಡಿದರು.
ಪ್ರಕಾಶಕ ಶ್ಯಾಮ್ ಕುಷ್ಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಪಾಟೀಲ, ರವೀಂದ್ರ ಬಣಕಾರ ಕಾರ್ಯಕ್ರಮ ನಿರ್ವಹಿಸಿದರು.

ಬಾಕ್ಸ್...
ಎಪ್ರಿಲ್ನಲ್ಲಿ ಪ್ರಧಾನಿ ಮೋದಿ ಭೇಟಿ
ಹುಬ್ಬಳ್ಳಿ ಧಾರವಾಡ ಅಭಿವೃದ್ಧಿಯಿಂದ ವಂಚಿತವಾಗಿದ್ದು, ಕೇವಲ ನಾಲ್ಕು ಜನ ರಾಜಕಾರಣಿಗಳು ಮಾತ್ರ ಅಭಿವೃದ್ಧಿಯಾಗಿದ್ದಾರೆ. ಅಭಿವೃದ್ಧಿಯೆಂದರೆ ನಾಲ್ಕು ಜನ ರಾಜಕಾರಣಿಗಳ ಅಭಿವೃದ್ಧಿಯಲ್ಲ. ಈ ಬಗ್ಗೆ ಅವರು ತಪ್ಪಾಗಿ ತಿಳಿದುಕೊಂಡಂತೆ ಕಾಣುತ್ತಿದ್ದಾರೆ. ಹೀಗಾಗಿ ಎಪ್ರಿಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಈ ಕುರಿತು ಪ್ರಶ್ನಿಸಲಾಗುವುದು. ಹುಬ್ಬಳ್ಳಿ ಧಾರವಾಡಕ್ಕೆ ಒಂದು ರಿಂಗ್ ರಸ್ತೆಯಿಲ್ಲ. ಆದರೆ ರಾಜಕಾರಣಿಗಳ ಕೈ ತುಂಬಾ ರಿಂಗ್ಗಳಿವೆ ಎಂದು ಟೀಕಿಸಿದರು.
ನಮ್ಮ ಜನ ಬಾಯಿ ಮುಚ್ಚಿ ಕುಳಿತುಕೊಂಡಿರುವುದರಿಂದ ರಾಜಕಾರಣಿಗಳು ಹಣ ಮಾಡುವುದನ್ನೇ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಮುಖ್ಯ ಅಂಗ ಬಾಯಿ. ನಮ್ಮ ಬಾಯಿ ಕೆಲಸ ಮಾಡದಿರುವುದರಿಂದ ಅವರು ಆಡಿದ್ದೇ ಆಟವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಜನ ಗಂಭೀರ ಚಿಂತನೆ ನಡೆಸಬೇಕು ಎಂದು ಹೇಳಿದರು.



No comments:

Post a Comment