Monday, April 18, 2016

ನಾಗರಾಜ ಕಿರಣಗಿ ಸೇರಿ ಮೂವರ ಕೃತಿ ಲೋಕಾರ್ಪಣೆ ಮಾ. 26ರಂದು



ನಾಗರಾಜ ಕಿರಣಗಿ ಸೇರಿ ಮೂವರ ಕೃತಿ ಲೋಕಾರ್ಪಣೆ ಮಾ. 26ರಂದು
ಹಲವು ಹಿರಿಯ ಪತ್ರಕರ್ತರಿಗೆ ಗೌರವ ಸಮ್ಮಾನ
ಧಾರವಾಡ: ನಾಡಿನ ಹಿರಿಯ ಪತ್ರಕರ್ತರಾದ ಮನೋಹರ ಯಡವಟ್ಟಿ, ನಾಗರಾಜ ಕಿರಣಗಿ ಹಾಗೂ ವಿಜ್ಞಾನ ಲೇಖಕಿ ಡಾ. ಸುವಣರ್ಾ ಸಿ. ಚವಣ್ಣವರ ಅವರ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭ ಮಾ. 26ರಂದು ಶನಿವಾರ ಸಂಜೆ 4 ಗಂಟೆಗೆ ನಗರದ ಆಲೂರು ವೆಂಕಟರಾವ್ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಾಶಕ ಶ್ಯಾಮ್ ಕುಷ್ಟಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕನರ್ಾಟಕ ಕುಲ ಪುರೋಹಿತ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾಗೂ ನಮ್ಮ ಪಲ್ಸ್ ಮೀಡಿಯಾ ಮನೆ ಪ್ರಕಾಶನ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಸಮಾರಂಭವನ್ನು ನಿವೃತ್ತ ಡಿವೈಎಸ್ಪಿ ಕೃಷ್ಣಮೂತರ್ಿ ಹೊಸ್ಕೋಟಿ ಉದ್ಘಾಟಿಸುವರು. ನಾಡೋಜ ಪಾಟೀಲ ಪುಟ್ಟಪ್ಪ ಅವರು ಹಿರಿಯ ಪತ್ರಕರ್ತರಾದ ಮನೋಹರ ಯಡವಟ್ಟಿ ಅವರ ಟೂರಿಂಗ್ ಟಾಕೀಸ್, ಪತ್ರಕರ್ತ ನಾಗರಾಜ ಕಿರಣಗಿಯವರ ಚೊಚ್ಚಲ ಕವನ ಸಂಕಲನ ನಾನು ಮತ್ತು ನನ್ನ ಒಡಲಾಳ ಮತ್ತು ವಿಜ್ಞಾನ ಲೇಖಕಿ ಡಾ. ಸುವಣರ್ಾ ಸಿ. ಚವಣ್ಣವರ ಅವರ ಆಹಾರ ಆರೋಗ್ಯ ಹಾಗೂ ಸೂಕ್ಷ್ಮಾಣು ಜೀವಿಗಳು ಕೃತಿಯನ್ನು ಲೋಕಾರ್ಪಣೆಗೊಳಿಸುವರು. ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ವಿಶೇಷ ಆಹ್ವಾನಿತರಾಗಿ ಆಲೂರು ವೆಂಕಟರಾವ್ ಟ್ರಸ್ಟ್ನ ಸದಸ್ಯ ವೆಂಕಟೇಶ ದೇಸಾಯಿ ಪಾಲ್ಗೊಳ್ಳುವರು.
ಟೂರಿಂಗ್ ಟಾಕೀಸ್ ಹಾಗೂ ನಾನು ಮತ್ತು ನನ್ನ ಒಡಲಾಳ ಕೃತಿಗಳ ಕುರಿತು ಹಿರಿಯ ರಂಗಕಮರ್ಿ ಸುಭಾಸ ನರೇಂದ್ರ ಹಾಗೂ ಆಹಾರ ಆರೋಗ್ಯ ಹಾಗೂ ಸೂಕ್ಷ್ಮಾಣು ಜೀವಿಗಳು ಕುರಿತು ಕೃಷಿ ವಿವಿ ಪ್ರಾಧ್ಯಾಪಕಿ ಡಾ. ಗಂಗಾ ವಿ. ಎಣಗಿ ಮಾತನಾಡುವರು.
ಹಿರಿಯರಾದ ಸುಭದ್ರಾಬಾಯಿ ಕುಷ್ಟಗಿ, ನಮಿತಾ ಕೆ. ಜೋಶಿ, ಅರುಣ ಕುಷ್ಟಗಿ, ಶ್ಯಾಮಸುಂದರ ಜೋಶಿ, ಪರಮೇಶ್ವರಪ್ಪ ಬಣಕಾರ, ಹಿತವರಾದ ವಿನೋದ ಅಂಬೇಕರ, ನಂದಾ ರಾಜುಗೌಡ, ಚಿದಂಬರ ಕುಲಕಣರ್ಿ ಅವರಿಗೆ ಗೌರವಿಸಲಾಗುವುದು.
ನಂತರ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಪತ್ರಕರ್ತರಾದ ಮಲ್ಲಿಕಾಜರ್ುನ ಸಿದ್ಧಣ್ಣವರ, ಗಣೇಶ ಜೋಶಿ, ಜಿ.ಟಿ. ಹೆಗಡೆ, ಸಚಿನ್ ಶಿವಪೂರ, ಸಂಜಯ ಡೊಂಗ್ರೆ, ಹಾಗೂ ಹಿರಿಯ ಛಾಯಾಗ್ರಾಹಕರಾದ ಎಂ.ಆರ್. ಮಂಜುನಾಥ, ಗಣಪತಿ ಜರತಾರಫರ್ ಹಾಗೂ ರಾಕೇಶ ಬಾಬಜಿ ಅವರಿಗೆ 2016ರ ಪಿಎಂ2 ಸಂಸ್ಥೆಯ ಗೌರವ ಸಮ್ಮಾನ ನೆರವೇರಿಸಲಾಗುವುದು. ಬಳಿಕ ಪತ್ರಿಕಾ ಸಾಹಿತಿಗಳಾದ ಮನೋಹರ ಯಡವಟ್ಟಿ, ನಾಗರಾಜ ಕಿರಣಗಿ, ವಿಜ್ಞಾನ ಲೇಖಕಿ ಡಾ.. ಸುವಣರ್ಾ ಸಿ. ಚವಣ್ಣವರ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment