Wednesday, March 9, 2016

ಕಲಬುರಗಿಯಲ್ಲಿ ಪತ್ರಕರ್ತ ನಾಗರಾಜ ಕಿರಣಗಿ ಸೇರಿ ನಾಲ್ವರ ಕೃತಿ ಲೋಕಾರ್ಪಣೆ

ಕಲಬುರಗಿಯ ಕನ್ನಡ ಸಾಹಿತ್ಯ ಸಂಘದಲ್ಲಿ ನಮ್ಮ ಪಲ್ಸ್ ಮೀಡಿಯಾ ಮನೆ ಆಯೋಜಿಸಿದ್ದ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ನಾಲ್ವರು ಪತ್ರಕರ್ತರ ಕೃತಿಗಳನ್ನು ವಿವಿಧ ಕಾಲೇಜುಗಳ ವಿದ್ಯಾಥರ್ಿನಿಯರು ತೆಲೆ ಮೇಲೆ ಬುಟ್ಟಿಯನ್ನು ಹೊತ್ತುಕೊಂಡು ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದದ್ದು ಹೀಗೆ.

ಕಲಬುರಗಿಯ ಕನ್ನಡ ಸಾಹಿತ್ಯ ಸಂಘದಲ್ಲಿ ನಮ್ಮ ಪಲ್ಸ್ ಮೀಡಿಯಾ ಮನೆ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಶೇಷಮೂತರ್ಿ ಅವಧಾನಿ, ನಾಗರಾಜ ಕಿರಣಗಿ, ಶ್ರೀನಿವಾಸ ಸಿರನೂರಕರ್ ಹಾಗೂ ಜಯತೀರ್ಥ ಕಾಗಲ್ಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಕಾಶಕ ಶ್ಯಾಮ ಕುಷ್ಟಗಿ, ಬಸವರಾಜ ಭೀಮಳ್ಳಿ, ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ಇದ್ದರು. 

ಕಲಬುರಗಿಯ ಕನ್ನಡ ಸಾಹಿತ್ಯ ಸಂಘದಲ್ಲಿ ನಮ್ಮ ಪಲ್ಸ್ ಮೀಡಿಯಾ ಮನೆ ಆಯೋಜಿಸಿದ್ದ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭ
* ಕಲಬುರಗಿಯಲ್ಲಿ ಪತ್ರಕರ್ತ ನಾಗರಾಜ ಕಿರಣಗಿ ಸೇರಿ ನಾಲ್ವರ ಕೃತಿ ಲೋಕಾರ್ಪಣೆ
ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಬೇಡ : ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ ಸಲಹೆ 
ಧಾರವಾಡ: ಸಾಹಿತಿಗಳು ಹಾಗೂ ಪತ್ರಕರ್ತರು ಸಮಾಜ ಕಟ್ಟುವ ಕೆಲಸ ಮಾಡಬೇಕೆ ಹೊರತು, ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಮಾಡಬಾರದು ಎಂದು ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಸಲಹೆ ನೀಡಿದರು.
ಅವರು ಕಲಬುರಗಿಯ ಕನ್ನಡ ಸಾಹಿತ್ಯ ಸಂಘದಲ್ಲಿ ಹಿರಿಯ ಪತ್ರಕರ್ತರಾದ ಶ್ರೀನಿವಾಸ ಸಿರನೂರಕರ್ ಅವರ ಸ್ಮಾಲ್ ಆಲ್ಸೋ ಮ್ಯಾಟರ್ಸ್, ಶೇಷಮೂತರ್ಿ ಅವಧಾನಿ ಅವರ ಅಭಿವೃದ್ಧಿಯ ಅನ್ವೇಷಣೆಯಲ್ಲಿ, ನಾಗರಾಜ ಕಿರಣಗಿಯವರ "ನಾನು ಮತ್ತು ನನ್ನ ಒಡಲಾಳ" ಕವನ ಸಂಕಲನ ಹಾಗೂ ದಿ. ವಿ.ಎನ್. ಕಾಗಲ್ಕರ್ ಅವರ ಜೀವಿತಾವಧಿಯ ಕಾಗಲ್ಕರ್ ಡೈರಿ ಆನ್ ಕಲಬರುಗಿ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.   
ಇತ್ತೀಚಿನ ದಿನಗಳಲ್ಲಿ ಅಕ್ಷರ ಲೋಕದ ಮೂಲಕ ಸಾಹಿತಿಗಳಲ್ಲಿ ಹಾಗೂ ಪತ್ರಕರ್ತರಲ್ಲಿ ಅಸಹನೆ ಭಾವನೆ ಹೆಚ್ಚುತ್ತಿದೆ. ಒಬ್ಬರನ್ನು ಹೊಗಳಿ, ಇನ್ನೊಬ್ಬರನ್ನು ತೆಗಳುವ ಕೆಲಸ ನಿಲ್ಲಬೇಕಿದೆ. ಸಾಂಸ್ಕೃತಿಕ ಲೋಕದಿಂದ ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕಿದೆ. ಪರಸ್ಪರ ಟೀಕಾ ಮನೋಭಾವನೆ, ದ್ವೇಷ ಹುಟ್ಟುಹಾಕಬಾರದು ಎಂದು ಹೇಳಿದರು. 
ಪತ್ರಕರ್ತ ನಾಗರಾಜ ಕಿರಣಗಿಯವರ ಮೂರನೇ ಕೃತಿ ಹಾಗೂ ಚೊಚ್ಚಲ ಕವನ ಸಂಕಲನ `ನಾನು ಮತ್ತು ನನ್ನ ಒಡಲಾಳ' ಪತ್ರಕರ್ತರ ಮನಸ್ಥಿತಿಯನ್ನು ಅನಾವರಣಗೊಳಿಸಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದಿದ್ದು, ಅವರು ತಮ್ಮ ಸಂವೇದನಾಶೀಲ ಸಾಹಿತ್ಯದ ಮೂಲಕ ಸಮಾಜ ಬೆಳಗುವ ಕೆಲಸ ಮಾಡಬೇಕಿದೆ. ಅವರಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಆಶಿಸಿದರು. 
ಬಳಿಕ ಹಿರಿಯ ಪತ್ರಕರ್ತರಾದ ಶೇಷಮೂತರ್ಿ ಅವಧಾನಿ, ನಾಗರಾಜ ಕಿರಣಗಿ, ಶ್ರೀನಿವಾಸ ಸಿರನೂರಕರ್, ಜಯತೀರ್ಥ ಕಾಗಲಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹೈದ್ರಾಬಾದ ಕನರ್ಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಭೀಮಳ್ಳಿ ಅವರು ಸಮಾರಂಭ ಉದ್ಘಾಟಿಸಿದರು. ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ಅಧ್ಯಕ್ಷತೆ ವಹಿಸುವರು. 
ನಮ್ಮ ಪಲ್ಸ್ ಮೀಡಿಯಾ ಮನೆ ಪ್ರಕಾಶಕ  ಶ್ಯಾಮ ಕುಷ್ಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಡಾ. ಆನಂದ ಕಿತ್ತೂರ ಹಾಗೂ ಡಾ. ಸಂಗೀತಾ   ಕಟ್ಟಿಮನಿ ಕೃತಿಗಳನ್ನು ಪರಿಚಯಿಸಿದರು. 

ಬಾಕ್ಸ್...
ಪುಸ್ತಕಗಳ ಮೆರವಣಿಗೆ...
ನಾಲ್ವರು ಪತ್ರಕರ್ತರ ಕೃತಿಗಳನ್ನು ವಿವಿಧ ಕಾಲೇಜುಗಳ ವಿದ್ಯಾಥರ್ಿನಿಯರು ತೆಲೆ ಮೇಲೆ ಬುಟ್ಟಿಯನ್ನು ಹೊತ್ತುಕೊಂಡು ಮೆರವಣಿಗೆ ಮೂಲಕ ವೇದಿಕೆಗೆ ಕರೆ ತಂದರು. ಆ ಮೂಲ ಪ್ರಕಾಶಕ ಶ್ಯಾಮ ಕುಷ್ಟಗಿ ಎಲ್ಲರ ಗಮನ ಸೆಳೆದರು. ಅಲ್ಲದೆ, ಸನ್ಮಾನಿತರಿಗೆ ಆರತಿ ಬೆಳಗಿ, ಸಿಹಿ ನೀಡುವ ದೇಸಿ ಸಂಸ್ಕೃತಿಯನ್ನು ಅನಾವರಣಗೊಳಿಸುವ ಮೂಲಕ ಸಮಾರಂಭಕ್ಕೆ ಇನ್ನಷ್ಟು ಮೆರಗು ನೀಡಿದರು.