Thursday, April 21, 2016

ಅಭಿವೃದ್ಧಿಗೆ ಪತ್ರಕರ್ತರು ಶ್ರಮಿಸಬ:ೇಕು

                        ಅಭಿವೃದ್ಧಿಗೆ ಪತ್ರಕರ್ತರು ಶ್ರಮಿಸಬ:ೇಕು
ಧಾರವಾಡ: ಜನಸಾಮಾನ್ಯರ  ಬದುಕಿಗಾಗಿ  ಅಗತ್ಯವಾಗಿರುವ ಮೂಲಭೂತ ಸೌಲಭ್ಯಗಳ  ಕೊರತೆಗಳನ್ನು ಬಿಂಬಿಸುವ ಮೂಲಕ ಅಭಿವೃದ್ಧಿಗೆ ಪತ್ರಕರ್ತರು ಶ್ರಮಿಸಬೇಕು ಎಂದು ಪತ್ರಕರ್ತ ನಾಗರಾಜ ಕಿರಣಿಗಿ  ಹೇಳಿದರು.
    ಕವಿವಿಯ ಪತ್ರಿಕೋದ್ಯಮ ವಿಭಾಗವು ಆಯೋಜಿಸಿದ್ದ ಸಂವಹನ ಕೂಟದಲ್ಲಿ " ಅಭಿವೃದ್ಧಿ ಪತ್ರಿಕೋದ್ಯಮ" ಎಂಬ ವéಿಷಯ ಕುರಿತು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
    ಅಭಿವೃದ್ಧಿ ಕಡೆಗೆ ಕಿಂಚಿತ್ತು ಕಾಳಜಿ ಇಲ್ಲದವ ಒಬ್ಬ ಉತ್ತಮ ಪತ್ರಕರ್ತ ಆಗಲಾರ. ಅಭಿವೃದ್ಧಿ ಎಡೆಗಿನ ಸುದ್ದಿಗಳನ್ನು ಬಿತ್ತಿಸುವುದರಿಂದ ಸ್ಪೂತರ್ಿಗೊಂಡು ಅಂತಹ ಕೆಲಸವನ್ನು ಸ್ವ ಹಿತಾಸಕ್ತಿಯಿಂದ ಮಾಡುವ ಮಾಡಿಸುವ ಕೆಲಸ ಮಾಧ್ಯಮದ್ದಾಗಿರಬೇಕು. ಇಂದು ನಕಾರಾತ್ಮಕ ಚಿಂತನೆಯನ್ನು ಬಿತ್ತುವಂತಹ ಪತ್ರಿಕೆಗಳನ್ನು ಓದುವುದನ್ನು ಅಂತಹ ಸುಧ್ದಿ ವಾಹಿನಿಗಳನ್ನು ನೋಡುವುದನ್ನು ಜನ ನಿಲ್ಲಿಸಬೇಕು. ಜನರು ಒಳ್ಳೆಯ ವಿಚಾರಗಳನ್ನು ಮಾತ್ರ ಮಾಧ್ಯಮದಿಂದ ಸ್ವೀಕರಿಸುತ್ತಾರೆ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲೇ ಅನೇಕ ಉದಾಹರಣೆಗಳಿವೆ ಎಂಬುದನ್ನು ತಿಳಿಸಿದರು.
     ಸದ್ಯ ಮಾಧ್ಯಮಗಳಲ್ಲಿ ಪತ್ರಕರ್ತರಿಗೆ ಅನೇಕ ನಾನಾ ಒತ್ತಡಗಳಿದ್ದು, ಪತ್ರಕರ್ತ ಸಕಾರತ್ಮವಾಗಿ ಚಿಂತಿಸಬೇಕು. ಇಂದು ಗ್ರಾಮೀಣ ಪ್ರದೇಶಗಳಲ್ಲಿ ಜಮೀನು ಹೊಂದಿದ ರೈತನೂ ಕೂಲಿ ಕಾಮರ್ಿಕನಾಗಿದ್ದಾನೆ. ಇದಂರಿಂದ ಬೇಸತ್ತ ರೈತರು ಜೀವನೋಪಾಯವನ್ನು ಹುಡಕಿಕೊಂಡು ನಗರ ಪ್ರದೇಶಗಳಿಗೆ ದಿನದ ಕೂಲಿ ಬದುಕು ನಡಿಸುವಂತಾಗಿದೆ. ಹಳ್ಳಿ ಜನರ ಮೂಲ ಕಸುಬು ಕಾರ್ಯಗಳ ವಾಸ್ತವ ಸ್ಥಿತಿ ಮತ್ತು ಅವರ ಬದುಕಲ್ಲಿ ಬೆಳಕು ಚೆಲ್ಲಬೇಕಿದ್ದು,ಈ ದೃಷ್ಠಿಯಿಂದ ಪತ್ರಕರ್ತ ಮಾನವೀಯತೆಯಿಂದ ಬೆಳಕು ಚೆಲ್ಲವ ಕೆಲಸ ಮಾಡಬೇಕೆಂದು ಯುವ ಪತ್ರಕರ್ತರಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ ಜೆ ಎಮ್ ಚಂದುನವರ ಜನಪರ ಪತ್ರಿಕೋದ್ಯಮವು ಇಂದು ಸಮಾಜದಲ್ಲಿ ಪತ್ರಕರ್ತರಿಗೆ ಸವಾಲಾಗಿದ್ದು, ಅಭಿವೃದ್ಧಿಪರ ಚಿಂತನೆಗಳಿಂದ ಜನಸಾಮಾನ್ಯರ ಬದುಕುಗಳನ್ನು ಸುಧಾರಿಸುವ ಜವಾಬ್ಧಾರಿಯನ್ನು ಯುವ ಪತ್ರಕರ್ತರ ಮೇಲಿದೆ ಎಂದು ಹೇಳಿದರು.
ಅತಿಥಿ ಉಪನ್ಯಾಸಕ ಡಾ ವಿಶ್ವನಾಥ ಚಿಂತಾಮಣಿ ಉಪಸ್ಥಿತರಿದ್ದರು. ಮಹಾಂತೇಶ ಜಾಂಗಟಿ ನಿರೂಪಿಸಿದರು. ಕಾವೇರಿ ಝಂಡೆ ಪ್ರಾಥರ್ಿಸಿದರು. ಗಾಯತ್ರಿ ಬಡಿಗೇರ ಅತಿಥಿ ಪರಿಚಯ ಮಾಡಿದರು. ಬಾಲಕೃಷ್ಣ ಜಾಡಬಂಡಿ ಸ್ವಾಗತಿಸಿದರು. ರಾಕಿ ನಾಯಕ ವಂದಿಸಿದರು.

No comments:

Post a Comment